Song Cover Image

ಶ್ರೀಮಲ್ಲಿಕಾರ್ಜುನ

ಏನು ಹೇಳಲಿ ಏನು ಹೇಳಲಿ ಶ್ರೀಮಲ್ಲಿಕಾರ್ಜುನ ನಿನ್ನ ಲೀಲೆಯು ಮಹಾ ಅದ್ಭುತ ಶ್ರೀ ಮಲ್ಲಿಕಾರ್ಜುನ.( ಪಲ್ಲವಿ) ಎಲ್ಲೋ ಇದ್ದ ನನ್ನ ಬಾಳಿಗೆ ಬೆಳಕು ನೀಡಿದೆ. ಹೇಗೋ ಇದ್ದ ನನ್ನ ಬಾಳಿಗೆ ತಂಪು ನೀಡಿದೆ. ( ಏನು ಹೇಳಲಿ) ಅರ್ಥ ಇಲ್ಲದ ನನ್ನ ಬಾಳಿಗೆ ಪರಮಾರ್ಥ ನೀಡಿದೆ. ನನಗೆ ಒಳ್ಳೆ ಬಾಳುವಂತೆ ಪಾತ್ರ ನೀಡಿದೆ. ( ಏನು ಹೇಳಲಿ) ನನ್ನ ಪ್ರೀತಿಗೆ ಓ ಗೊಟ್ಟು ಈ ಭೂಮಿಗೆ ಬಂದೆ. ನನ್ನ ನೀನು ಅಪ್ಪಿಕೊಂಡು ಮುದ್ದು ಮಾಡಿದೆ. ( ಏನು ಹೇಳಲಿ) ಸುಂದರ ಪ್ರಕೃತಿಯ ನಡುವೆ ವಾಸ ಮಾಡಿದೆ. ನಿಡಗಲ್ಲಿನ ಕ್ಷೇತ್ರವನ್ನು ನೀನು ಪಾವನ ಮಾಡಿದೆ. ( ಏನು ಹೇಳಲಿ)