ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಕದ ಬಾಗಿಲಿರಿಸಿಹ ಕಳ್ಳ ಮನೆ ಇದು ಮುದದಿಂದ ಲೋಲಾಡೋ ಸುಳ್ಳು ಮನೆ ಇದಿರಾಗಿ ವೈಕುಂಟ ವಾಸ ಮಾಡುವಂಥ ಪಡುಮನಾಭಾನ ದಿವ್ಯ ಬದುಕುಮನೆ // ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ// ಮಾಳಿಗೆ ಮನೆಯೆಂದು ನೆಚ್ಚಿ ಕೆಡಲು ಬೇಡ ಕೇಳಯ್ಯ ಹರಿಕಥೆ ಶ್ರವಣಂಗಳ ನಾಳೆ ಯಮದೂತರು ಬಂದು ಎಳೆದು ಒಯುವಾಗ ಮಾಳಿಗೆ ಮನೆ ಸಂಗಡ ಬಾರದಯ್ಯ // ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ// ಮಡದಿ ಮಕ್ಕಳೆಂಬ ಹಂಬಲ ನಿನಗ್ಯಾಕೋ ಕಾಡುಗಬ್ಬುತನದಲಿ ನಡೆಯದಿರು ಒಡೆಯ ಪುರಂಧರ ವಿಠಲನ.... ಪುರಂದರ ವಿಠಲನ.... ವಿಠಲಾ...... ಒಡೆಯ ಪುರಂಧರ ವಿಠಲನ ಚರಣವ ದೃಢ ಭಕ್ತಿಯಲಿ ನೀ ಭಜಿಸಲೋ ಮನುಜಾ ದೃಢ ಭಕ್ತಿಯಲಿ ನೀ ಭಜಿಸಲೋ ಮನುಜಾ........ ಗಾಯನ: ಸಮರ್ಥ ಚೈತನ್ಯ ಸಾಹಿತ್ಯ: ಶ್ರೀ ಪುರಂಧರ ದಾಸರು ಗಾಯನ: ಸಮರ್ಥ ಚೈತನ್ಯ ಸಾಹಿತ್ಯ: ಶ್ರೀ ಪುರಂಧರ ದಾಸರು


